ಬಲ್ಲತನವನೇರಿಸಿಕೊಂಡು ಅಲ್ಲದಾಟವನಾಡಿದಡೆ
ಬಲ್ಲತನಕ್ಕೆ ಭಂಗವಾಯಿತ್ತು.
ವ್ಯಸನದಿಚ್ಛೆಗೆ ಹರಿದಾಡುವವರು ಬಲ್ಲಡೆ ಹೇಳಿರೆ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿಚ್ಛೆಗೆ ಹರಿದು
ಹಂದಿಯೊಡನಾಡಿದ ಕಂದಿನಂತಾದರು.
ಇನ್ನು ಬಲ್ಲರೆ ಗುಹೇಶ್ವರಾ ಮಾಯಾಮುಖರು ನಿಮ್ಮನು?
Transliteration Ballatanavanērisikoṇḍu alladāṭavanāḍidaḍe
ballatanakke bhaṅgavāyittu.
Vyasanadicchege haridāḍuvavaru ballaḍe hēḷire?
Kāma krōdha lōbha mōha mada matsaradicchege haridu
handiyoḍanāḍida kandinantādaru.
Innu ballare guhēśvarā māyāmukharu nim'manu?
Hindi Translation ज्ञानी जैसे दंभ से मिथ्या व्यवहार करे तो।
ज्ञान का भंग हुआ !
विषयानुराग से फिरनेवाले जाने तो बताइए।
समस्त इकट्टे हुए चर्चा गोष्टि के निर्लज्ज जाने तो बताइए।
काम क्रोध लोभ मोह मद मत्सर के इच्छानुसार बोलनेवाले
सुअर के साथ मिली गाय जैसे हुए।
तुम्हें और क्या जाने गुहेश्वरा मायामुखी ?
Translated by: Eswara Sharma M and Govindarao B N
Tamil Translation வல்லோம் எனச் செருக்குற்று, ஞானத்திற்குத்தகாத
ஆட்டம் ஆடினால், அது வல்லமைக்குக் கேடன்றோ
தகாத பழக்கங்களை உடையவரே, அறிந்திருப்பின் கூறுமின்
அனைவரையும் சபைக்கழைத்து, சொல்லாடும்
நீவிர் அறிந்திருப்பின் கூறுமின்
காமம், கோபம், உலோபம், மோகம், மதம் பொறாமைக்கு
ஆட்பட்டோர், பன்றியுடனாடும் பசுவனையர்
அஞ்ஞானியர் உம்மை அறிவரோ குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲ್ಲದಾಟ = ಜ್ಞಾನಕ್ಕೆ ಸಲ್ಲದ ವರ್ತನೆ; ಬಲ್ಲತನ = ನನಗೆ ಎಲ್ಲವೂ ತಿಳಿದಿದೆ ಎಂಬ ಹುಸಿ ಭಾವ; ಈ ಭಾವವನ್ನು ತಲೆಗೇರಿಸಿಕೊಂಡವರು ಮಿಥ್ಯಾಜ್ಞಾನಿಗಳು; ಭಂಗ = ಕೊರತೆ; ಮಾಯಾಮುಖರು = ಮಾಯೆಗೆ ಒಳಗಾದವರು, ಅಜ್ಞಾನದ ಸೆಳವಿಗೆ ಸಿಕ್ಕಿದವರು, ಆತ್ಮವಿಮುಖರು;
Written by: Sri Siddeswara Swamiji, Vijayapura