Index   ವಚನ - 330    Search  
 
ಸತ್ತುರೂಪು ಲಿಂಗ, ಚಿತ್ತುರೂಪು ಜಂಗಮ, ಆನಂದರೂಪು ಪ್ರಸಾದ. ಇಂತೀ ತ್ರಿವಿಧವಾದ ಅರಿವನು ಶ್ರೀಗುರು ಇಷ್ಟಲಿಂಗದಲ್ಲಿ ತೋರಿ ಬಿಜಯಂಗೈಸಿ ಕೊಟ್ಟ ಬಳಿಕ, ಸತ್ತುಚಿತ್ತಾನಂದವೆಂಬ ಬಟ್ಟಬಯಲೇಕಯ್ಯಾ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.