ಸದ್ಗುರುವೇ ಶಿವಲಿಂಗವು,
ಸದ್ಗುರುವೇ ಜಂಗಮಲಿಂಗವು,
ಸದ್ಗುರುವೆ ಪ್ರಸಾದಲಿಂಗವು, ಸದ್ಗುರುವೆ ಸದ್ಭಕ್ತನು,
ಎಂದೆಂಬ ಮಹಾಜ್ಞಾನಜ್ಯೋತಿಪ್ರಕಾಶವಾದ
ಜ್ಯೋತಿರ್ಮಯಲಿಂಗವೇ ಗುರುವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Sadguruvē śivaliṅgavu,
sadguruvē jaṅgamaliṅgavu,
sadguruve prasādaliṅgavu, sadguruve sadbhaktanu,
endemba mahājñānajyōtiprakāśavāda
jyōtirmayaliṅgavē guruvayyā,
uriliṅgapeddipriya viśvēśvarā.