ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತನಾಗಿ,
ಲಿಂಗ ಮುಂತಾಗಿ ಮಾಡಿದ ಕ್ರೀಗಳು ಲಿಂಗಕ್ರೀ.
ಪೂಜೆ, ಧ್ಯಾನ, ಅರ್ಪಿತ, ಪ್ರಸಾದ,
ಮುಕ್ತಿ ಇವೆಲ್ಲವು ಲಿಂಗದೊಳಗು.
ಅಜ್ಞಾನ, [ಅ]ಭಕ್ತಿ, ಮರವೆ,
ಅಂಗ ಮುಂತಾಗಿ ಮಾಡಿದ ಕ್ರೀಗಳು ಅಂಗಕ್ರೀ,
ಅದು ಹೊರಗು.
ಇದು ಕಾರಣ, ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಸದ್ಭಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.