ನಾಮ ನೇಮಂಗಳಾಗಿಪ್ಪ ಹಿರಿಯರು ಆದಿಕುಳವನರಿಯರಾಗಿ,
ಇದೇನಯ್ಯಾ, ಸೂಕ್ಷ್ಮದ ಗಂಟಲಗಾಣವಿದೇನಯ್ಯಾ?
ನೆಳಲ ರೂಹಿಂಗೆ ಬಯಲು ಸಯವೆ
ಅಪಾಯರಹಿತ ಗುಹೇಶ್ವರಾ?
Transliteration Nāma nēmaṅgaḷāgippa hiriyaru ādikuḷavanariyarāgi,
idēnayyā, sūkṣmada gaṇṭalagāṇavidēnayyā?
Neḷala rūhiṅge bayalu sayave
apāyarahita guhēśvarā?
Hindi Translation नामी नेमी हुए बडे आदी का मूल नहीं जानते,
यह क्या है, सूक्ष्म गला कोल्हू है ?
छाया रूह को शून्य सम है ?
अपाय रहित गुहेश्वरा ?
Translated by: Eswara Sharma M and Govindarao B N
Tamil Translation பெயருக்காக நியமங்களை ஆற்றும் பெரியோர்
மெய்ப்பொருளின் நிலையை அறியார்
இது என்னவோ, சூட்சுமத்தைக் காண தடை என்ன ஐயனே?
நிழல் வடிவினர் பரம்பொருளை உணர்வரோ?
அபாயமற்றவன் சரணன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿಯ ಕುಳ = ಮೂಲವಸ್ತುವಿನ ನೆಲೆ-ಕಲೆ; ಗಂಟಲ ಗಾಣ = ಪ್ರತಿಬಂಧಕ, ಅಂತರಾಯ; ನಾಮ-ನೇಮಂಗಳಾಗಿಪ್ಪ ಹ = ನಾಮಮಾತ್ರಕ್ಕೆ ನೇಮಂಗಳಲ್ಲಿ ತೊಡಗಿದವರು, ನಾಮಪ್ರಿಯರು ಹಾಗೂ ವ್ರತ ನೇಮಗಗಳಲ್ಲಿ ಆಸಕ್ತರು; ನೆಳಲ ರೂಹು = ಛಾಯಾಮಾತ್ರವಾದ ಮಾಯೆಯು ನೆಳಲು, ಆ ಮಾಯಾನಿರ್ಮಿತವಾದ ದೇಹವು ನೆಳಲ ರೂಹು, ನಶ್ವರದೇಹ;
Written by: Sri Siddeswara Swamiji, Vijayapura