ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು.
ಮನದ ಮುಂಬಾಗಿಲಲ್ಲೇ ಭೋಗಲಿಂಗವಿದ್ದು,
ಅದ್ಥಿಕಾರ ಲಯಹೊದ್ದದೆ ಸಕಲಭೋಗಂಗಳ ಭೋಗಿಸಿ
ಪ್ರಸಾದವ ಕರಣಂಗಳಿಗೆ ಕೊಟ್ಟು ಅರುಹಿ,
ಎನ್ನ ಮನವ ತನ್ನತ್ತ ಸೆಳೆದು ಮರಹ ಮಾಣಿಸಿ,
ಕುರುಹಳಿದು ತೆರಹುಗೊಡದ
ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ.
Art
Manuscript
Music
Courtesy:
Transliteration
Indriyada bāgilalli manavippudu.
Manada mumbāgilallē bhōgaliṅgaviddu,
adthikāra layahoddade sakalabhōgaṅgaḷa bhōgisi
prasādava karaṇaṅgaḷige koṭṭu aruhi,
enna manava tannatta seḷedu maraha māṇisi,
kuruhaḷidu terahugoḍada
saurāṣṭra sōmēśvaraliṅgava kaṇḍe.