ಕಾಯದ ಗತಿಯಿಲ್ಲ, ನಡೆವವನಲ್ಲ.
ಅಕಾಯಚರಿತ್ರನು, ಅನುಪಮಲಿಂಗೈಕ್ಯನು.
ಕುಲ, ಛಲ, ವಿದ್ಯಾಮದ, ಮೋಹ, ಬಲುವಿಡಿಯ.
ನಿರಹಂಕಾರವಿಡಿದು, ನಿರಂಗ ಸುಜ್ಞಾನ ಒಡಲಾ[ಗಿ]
ಭರಿತಪ್ರಸಾದವಲ್ಲದನ್ಯವನರಿಯ. ಇದಕ್ಕೆ ಶ್ರುತಿ:
:ರುಚಿರೂಪಂ ನಚಾಜ್ಞಾನಂ ಅರ್ಪಿತಾನರ್ಪಿತಂ ತಥಾ
ಯಥಾ ವರ್ತೇತ ಯಸ್ಯಾಪಿ ಶಿವೇನ ಸಹ ಮೋದತೇ
ಎಂದುದಾಗಿ
ಅಂಗರುಚಿಯ ಹಂಗು ಹಿಂಗಿ
ಲಿಂಗರುಚಿಯ ಸಂಗವಾದ ಸುಸಂಗಿ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
Art
Manuscript
Music
Courtesy:
Transliteration
Kāyada gatiyilla, naḍevavanalla.
Akāyacaritranu, anupamaliṅgaikyanu.
Kula, chala, vidyāmada, mōha, baluviḍiya.
Nirahaṅkāraviḍidu, niraṅga sujñāna oḍalā[gi]
bharitaprasādavalladan'yavanariya. Idakke śruti:
:Rucirūpaṁ nacājñānaṁ arpitānarpitaṁ tathā
yathā vartēta yasyāpi śivēna saha mōdatē
endudāgi
aṅgaruciya haṅgu hiṅgi
liṅgaruciya saṅgavāda susaṅgi
saurāṣṭra sōmēśvarā, nim'ma śaraṇa.