ಕೃಶ ಮಧ್ಯ ಸ್ಥೂಲ, ಹ್ರಸ್ವ ದೀರ್ಘವಪ್ಪ ಬಹುಘಟದಂಬುವಿನಲ್ಲಿ
ಇನಬಿಂಬ ಪ್ರತಿಬಿಂಬಿಸುತ್ತಿರಲು
ಅದು ಒಂದು ಬಿಂಬವೊ, ಬಹುಬಿಂಬವೊ?
ಅಂಗ ಪ್ರತ್ಯಂಗ ನಿಚಯಂಗಳಲ್ಲಿ ಚೇತನಿಸುವ ಚೈತನ್ಯಾತ್ಮಕನು
ಏಕಾತ್ಮನೊ, ಹಲವಾತ್ಮನೊ?
ತತ್ವಪರಿಜ್ಞಾನದಿಂ ತಿಳಿದುನೋಡಲು ವಿಶ್ವಾವಕಾಶವಾಗಿಪ್ಪ ಆತ್ಮನು
ಹೋಗುವ ಹೊರಡುವಠಾನ್ನಾವುದೊ?
ಹೋಗಲಿಲ್ಲ ಬರಲಿಲ್ಲದಾತ್ಮನ ಹೋಯಿತ್ತು ಬಂದಿತ್ತೆಂಬ
ಲೀಲೆವಾರ್ತೆಯನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Kr̥śa madhya sthūla, hrasva dīrghavappa bahughaṭadambuvinalli
inabimba pratibimbisuttiralu
adu ondu bimbavo, bahubimbavo?
Aṅga pratyaṅga nicayaṅgaḷalli cētanisuva caitan'yātmakanu
ēkātmano, halavātmano?
Tatvaparijñānadiṁ tiḷidunōḍalu viśvāvakāśavāgippa ātmanu
hōguva horaḍuvaṭhānnāvudo?
Hōgalilla baralilladātmana hōyittu bandittemba
līlevārteyanēnembenayyā saurāṣṭra sōmēśvarā.