•  
  •  
  •  
  •  
Index   ವಚನ - 350    Search  
 
ಸುಖವ ಬಲ್ಲಾತ ಸುಖಿಯಲ್ಲ, ದುಃಖವ ಬಲ್ಲಾತ ದುಃಖಿಯಲ್ಲ. ಸುಖ-ದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ. ಹುಟ್ಟದ ಮುನ್ನ ಸತ್ತವರ ಕುರುಹ ಬಲ್ಲಡೆ, ಬಲ್ಲ ಗುಹೇಶ್ವರಾ.
Transliteration Sukhava ballāta sukhiyalla, duḥkhava ballāta duḥkhiyalla. Sukha-duḥkhaveraḍanū ballāta jñāniyalla. Huṭṭada munna sattavara kuruha ballaḍe, balla guhēśvarā.
Hindi Translation सुख जाननेवाला सुखी नहीं, दुःख जाननेवाल दुःखी नहीं। सुख-दुःख दोनों को जानने वाला ज्ञानी नहीं। जन्म के पहले मरे हुओं का चिह्न जाने तो जानेवाला गुहेश्वरा। Translated by: Eswara Sharma M and Govindarao B N
Tamil Translation சுகத்தை உணர்ந்தவன் சுகியன்று துயரத்தை உணர்ந்தவன் துக்கியன்று இன்ப, துன்பத்தை உணர்ந்தவன் ஞானியன்று தோன்றும் முன்பே மடிந்தவரின் இலட்சணத்தை அறிந்தால் உணர்வான் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಸತ್ತವರ ಕುರುಹು = ಸತ್ ಆಗಿ (ನಿತ್ಯ ಸತ್ ಆಗಿ) ಇರುವವರ ಲಕ್ಷಣ; ಹುಟ್ಟದ ಮುನ್ನ = ಸುಖದ ಜ್ಞಾನ, ದುಃಖದ ಜ್ಞಾನ, ಸುಖ-ದುಃಖಮಿಶ್ರದ ಜ್ಞಾನ ಹುಟ್ಟುವ ಮುಂಚೆಯೇ; Written by: Sri Siddeswara Swamiji, Vijayapura