ತನುಭಾವವಳಿದು ಲಿಂಗಾನುಭಾವದಲ್ಲಿ ನಿಲಲರಿಯದೆ
ದೇಹೋಹಂ ಎಂದು
ಅಜಡವಪ್ಪ ಶಿವನನರಿಯದೆ,
ಜಡವಪ್ಪ ತನುಕರಣಭೋಗಭುವನಂಗಳನೆ ಕಂಡು
ಭಾವ ಭ್ರಮೆಗೊಂಡುದಕ್ಕೆ ಶ್ರುತಿ:
ಅತೋ ದೃಶ್ಯಮಿದಂ ಭ್ರಾಂತಂ ದೇಹ್ಯೋಹಂಭಾವಜಡತಾ
ಎಂದುದಾಗಿ, ಇಂತಪ್ಪ ಶಿವಜ್ಞಾನವಿಹೀನರು
ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಸಲ್ಲದೆ ಹೋದರು.
Art
Manuscript
Music
Courtesy:
Transliteration
Tanubhāvavaḷidu liṅgānubhāvadalli nilalariyade
dēhōhaṁ endu
ajaḍavappa śivananariyade,
jaḍavappa tanukaraṇabhōgabhuvanaṅgaḷane kaṇḍu
bhāva bhramegoṇḍudakke śruti:
Atō dr̥śyamidaṁ bhrāntaṁ dēhyōhambhāvajaḍatā
endudāgi, intappa śivajñānavihīnaru
saurāṣṭra sōmēśvaraliṅgakke sallade hōdaru.