ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು?
ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ,
ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ?
ಗುಹೇಶ್ವರಾ, ನಿಮ್ಮ ಶರಣರು,
ಬಾರದ ಭವದಲ್ಲಿ ಬಂದ ಕಾರಣ
ಸುಖಿಗಳಾದರಯ್ಯಾ.
Art
Manuscript
Music Courtesy:
Video
TransliterationManada marave tanuvinalliralu adento arivu?
Eraḍu beṭṭakke onde taleyoḍḍi dharisida baḷika,
tale kālige ikkida baḷḷi entu harivudo?
Guhēśvarā, nim'ma śaraṇaru,
bārada bhavadalli banda kāraṇa
sukhigaḷādarayyā.
Hindi Translationमन का भूल शरीर में होतो वह कैसा ज्ञान ?
दो पहाडों पर एक सिररख ने पर,
सिर पैर में रखी लता कैसे दूर होती ?
गुहेश्वरा, तुम्हारे शरण
न आनेवाले भव में आने से सुखी हैं।
Translated by: Eswara Sharma M and Govindarao B N
English Translation
Tamil Translationமனத்தின் மறதி உடலில் இருக்கும் பொழுது
ஆன்ம அறிவு எங்ஙனம் ஏற்படும்?
இரு மலைகளுக்கு ஒரு தலையைச் சேர்த்தபிறகு
தலை, காலை இணைத்து ஒரு கொடி சுற்றிக் கொண்டது
குஹேசுவரனே, உம் சரணர், இறுதி பிறவியில்
தோன்றியதால் இன்பமுற்றோர் ஐயனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿವು = ನಿಜಾತ್ಮಜ್ಞಾನ, ಸತ್ಯದ ಸಾಕ್ಷಾತ್ಕಾರ; ಎರಡು ಬೆಟ್ಟ = ನಾನು, ನನ್ನದು ಎಂಬ ಎರಡು ಜಡಭಾವಗಳು; ಬಳ್ಳಿ = ಮಾಯಾಪ್ರಪಂಚ, ಸಂಸಾರ-ವ್ಯಾಮೋಹ; ಬಾರದ ಭವ = ಭವ ಎಂದರೆ ಜನ್ಮ, ಯಾವ ಭವದಲ್ಲಿ ಬಂದರೆ ಇನ್ನೊಮ್ಮೆ ನಾವು ಬರಲಾರೆವೋ ಅದು ಬಾರದ ಭವ,
ಅಂತಿಮ ಜನ್ಮ, ಪವಿತ್ರ ಜನ್ಮ; ಮರವೆ = ಆತ್ಮವಿಷಯಕ ಅಜ್ಞಾನ, ತಾನಲ್ಲದ ವಸ್ತುವಿನಲ್ಲಿ ತಾನೆಂಬ ಬುದ್ದಿ; Written by: Sri Siddeswara Swamiji, Vijayapura