•  
  •  
  •  
  •  
Index   ವಚನ - 37    Search  
 
ಹಿರಿದಪ್ಪ ಜಲಧಿಯ ಮಡುವಿನೊಳಗೆ, ಕರಿಯ ಕಬ್ಬಿಲ ಜಾಲವ ಬೀಸಿದ ನೋಡಯ್ಯಾ. ಅರಿದ ತಲೆ ಐದು, ಅರಿಯದ ತಲೆ ಐದು, ಕರಿಯ ತಲೆ ಐದು, ಮುಂದೈದಾವೆ ನೋಡಯ್ಯಾ. ಕರಿಯ ಕಬ್ಬಿಲ ಜಾಲವ ಹೊತ್ತುಕೊಂಡು ಹೋದಡೆ ನೇತ್ರದಲೋಕುಳಿಯಾಡಿತ್ತ ಕಂಡೆನು ಗುಹೇಶ್ವರಾ.
Transliteration Hiridappa jaladhiya maḍuvinoḷage, kariya kabbila jālava bīsida nōḍayyā. Arida tale aidu, ariyada tale aidu, kariya tale aidu, mundaidāve nōḍayyā. Kariya kabbila jālava hottukoṇḍu hōdaḍe nētradalōkuḷiyāḍitta kaṇḍenu guhēśvarā.
English Translation 2 In the wide waters of the deep Look! a dark fisherman has cast his net. And see, what fish he has caught: Five, with heads that know; Five, with heads that know not; And five, with heads for doing. When the dark fisherman goes home, Shouldering his net. Watch for the flush of joy in his eye, O Guheśvara!
Hindi Translation विशाल सागर के गड्ढे में काल पुरुष नेजाल बिछाया देखो। जानते सिर पाँच, नजानते सिर पाँच, अज्ञान के सिर पाँच, आगे हैं देखो। काल पुरुष जाल ढोकर जाये तो, नेत्र में हर्ष की होली मनाते देखा गुहेश्वरा । Translated by: Eswara Sharma M and Govindarao B N
Tamil Translation எல்லையற்ற கடலின் ஆழத்தில் கரிய வேடன் வலையை வீசினன் காணாய். அறிந்த தலை ஐந்து அறியாத தலை ஐந்து, கரிய தலை ஐந்து தாமாகவே வந்து பாசவலையில் சிக்கினர் காணாய்! கரியவேடன் வலையைச் சுமந்து சென்றபொழுது நிறை மகிழ் வெய்தியதைக் கண்டேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕರಿಯ ಕಬ್ಬಿಲ = ಯಾವಾಗಲೂ ಅದೃಶ್ಯನಾದ ಕಾಲಪುರುಷ, ಎಲ್ಲವನ್ನು ಮಿತಿಗೊಳಿಸುವ, ಎಲ್ಲವನ್ನು ಕಬಳಿಸುವ ಕಾಲರುದ್ರ; Written by: Sri Siddeswara Swamiji, Vijayapura