ಬುದ್ಧಿಯೊಡನೆ ಸಂಬಂಧವಾದ ಪುಣ್ಯಪಾದ ರೂಪವೆ
ಸಂಚಿತ ಪ್ರಾರಬ್ಧ ಆಗಾಮಿತನದ ವಾಸನೆ
ಆದುಳ್ಳನ್ನಕ್ಕಹುಟ್ಟುಹೊಂದು
ನಟ್ಟುನಿಂದು ಬಿಟ್ಟು ತೊಲಗದಿಪ್ಪುದು ನೋಡಯ್ಯಾ.
ಶಿವಪ್ರಸಾದ ಪ್ರಸಾದಿಸಲೊಡನೆ ಕರ್ಮಕ್ಷಯ.
ಆ ಕರ್ಮಕ್ಷಯದೊಡನೆ ಬುದ್ಧಿಯಳಿವು.
ಇಂತು ಬುದ್ಧಿ ಕರ್ಮವೆರಡರ ಅಳಿವು
ಶಿಖಿಕರ್ಪುರದಳಿವಿನಂತೆ.
ಅಳಿದ ಸಮನಂತರದಲ್ಲಿ ಮೋಕ್ಷ ಕಾಣಿಸಿಕೊಂಬುದು.
ಇದಕ್ಕೆ ಶ್ರುತಿ:
``ತಸ್ಯ ಕರ್ಮಾಣಿ ತಾವದೇವ ಚಿರಂ ಏವಂ ನ ವಿಮೋಕ್ಷ್ಯ ಅಧಸ್ತ್ವಂ
ಪಶ್ಯನ್ ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗದ
ಪ್ರಸಾದ ಅಪೂರ್ವವಯ್ಯಾ.
Art
Manuscript
Music
Courtesy:
Transliteration
Bud'dhiyoḍane sambandhavāda puṇyapāda rūpave
san̄cita prārabdha āgāmitanada vāsane
āduḷḷannakkahuṭṭuhondu
naṭṭunindu biṭṭu tolagadippudu nōḍayyā.
Śivaprasāda prasādisaloḍane karmakṣaya.
Ā karmakṣayadoḍane bud'dhiyaḷivu.
Intu bud'dhi karmaveraḍara aḷivu
śikhikarpuradaḷivinante.
Aḷida samanantaradalli mōkṣa kāṇisikombudu.
Idakke śruti:
``Tasya karmāṇi tāvadēva ciraṁ ēvaṁ na vimōkṣya adhastvaṁ
paśyan intendudāgi,
saurāṣṭra sōmēśvaraliṅgada
prasāda apūrvavayyā.