Index   ವಚನ - 321    Search  
 
ಲಿಂಗಪ್ರಸಾದ ತನಗಾಗಬೇಕೆಂಬ ಪ್ರಸಾದಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳ ತನ್ನ ತನುಕರಣಂಗಳ ಮುಟ್ಟಲೀಯದೆ, ಅಂಗ ಮುಂದಾಗಿ ಮನ ಹಿಂದಾಗಿ ಅಂಗಭಾವವಳಿದು ಅರ್ಪಿಸಿಕೊಳಬಲ್ಲಡೆ ಪ್ರಸಾದಿ. ಆ ಪ್ರಸಾದಿಯ ಪರಮಪರಿಣಾಮವೆ ಪ್ರಸಾದ. ಎಂತೆಂದಡೆ: ಸೌಖ್ಯಾಶ್ಶತಗುಣಾಧಿಕಂ ಯತ್ಪ್ರಸಾದೀ ಚ ಪ್ರೋಚ್ಯತೇ' ಎಂದುದಾಗಿ, ಇದೇ ಆದಿಪ್ರಸಾದವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.