ವಚನ - 365     
 
ದೂರದ ತುದಿಗೊಂಬನಾರಯ್ಯ ಗೆಲುವರು? ಮೀರಲಿಲ್ಲದ ನಿರಾಳದ ಘನವನು, ಮೀರಿ, ಕಾಬ ಘನವನು ಬೇರೆ ತೋರಲಿಲ್ಲ. ತೋರಿ ಕಾಬಡೆ ತನ್ನ ಹಿಡಿಯಲಿಲ್ಲ. ಓರೆ ಆವಿನ ಹಾಲನಾರಯ್ಯ ಕರೆವರು? ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ.