ವಚನ - 366     
 
ನಚ್ಚುಮಚ್ಚಿಂಗೆ ಪೂಜಿಸಿ ನಿಶ್ಚಯವೆಂದೆನಲಿಲ್ಲ. ತಾನು ಲಿಂಗವೊ? ಪ್ರಾಣ ಲಿಂಗವೊ? ಆವುದು ಲಿಂಗ? ಬಲ್ಲವರು ನೀವು ಹೇಳಿರೆ ಅಂಗದಲ್ಲಿ ಸಂಗಿಯಲ್ಲ, ಸಂಗದಲ್ಲಿ ವ್ಯಸನಿಯಲ್ಲ, ಅಂಗವಿಲ್ಲದ ಸಂಗ ಗುಹೇಶ್ವರಾ ನಿಮ್ಮ ಶರಣ.