ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನ.
ಮತ್ತಾ ಲಿಂಗವಶನಾಗಿ ಆಯತ ಸ್ವಾಯತದಲ್ಲಿ
ಲಿಂಗಮಯವಾಗಿಪ್ಪ ಶಿವಜ್ಞಾನಿಗಳಿಗೆ ಕರ್ಮವೆಡೆವೋಗಲೆಡೆಯಿಲ್ಲ.
ಹಿಂದಣ ಕರ್ಮ ಜ್ಞಾನಾಗ್ನಿಯಿಂದ ಉರಿದು ಭಸ್ಮವಾಯಿತ್ತು.
ಮುಂದಣ ಕರ್ಮ ನಿಂದೆವಂದಕರಲ್ಲಿ ಅಳಿಯಿತ್ತು,
ಇಂದಿನ ಕರ್ಮ ನಿಸ್ಸಂದೇಹದಲ್ಲಿ ಕೆಟ್ಟಿತ್ತು.
``ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ಮಮ ಎಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು
ನಿಃಕರ್ಮಿಗಳಾಗಿ ಲಿಂಗಸುಖಿಗಳು.
Art
Manuscript
Music
Courtesy:
Transliteration
Śivayōgige karmavilla, śivaśaraṇara patha liṅgādhīna.
Mattā liṅgavaśanāgi āyata svāyatadalli
liṅgamayavāgippa śivajñānigaḷige karmaveḍevōgaleḍeyilla.
Hindaṇa karma jñānāgniyinda uridu bhasmavāyittu.
Mundaṇa karma nindevandakaralli aḷiyittu,
indina karma nis'sandēhadalli keṭṭittu.
``Jñānāgniḥ sarvakarmāṇi bhasmasāt kurutē mama endudāgi,
saurāṣṭra sōmēśvarana śaraṇaru
niḥkarmigaḷāgi liṅgasukhigaḷu.