ವಚನ - 367     
 
ಎನ್ನಲ್ಲಿ ನಾನು ದೃಷ್ಟವೆಂದಡೆ ನಿಮ್ಮಲ್ಲಿ ನೀವು ಮೆಚ್ಚುವಿರೆ? ಸಂದೇಹದಿಂದ ಸವೆಯಿತ್ತು ಲೋಕವು. ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು, ಕಬ್ಬಿಸಿಲುಂಡ ಅರಿಸಿನದಂತೆ ಗುಹೇಶ್ವರಾ ನಿಮ್ಮ ಶರಣರು.