ಸಕಲೇಂದ್ರಿಯಂಗಳಲ್ಲಿ ವಿಕರಿಸುವ
ಮನವ ಸೆಳೆದು ನಿಂದಾತ ಸುಖಿ,
ಪಂಚೇಂದ್ರಿಯಂಗಳಿಚ್ಛೆಯೊಳು
ಮನಂಗೊಂಡು ಸುಳಿವಾತ ದುಃಖಿ.
ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ,
ಮನವಂತರ್ಮುಖವಾದಡವಿರಳ ಜ್ಞಾನಿ,
ಮನವು ಮಹದಲ್ಲಿ ನಿಂದಡಾತ ಮುಕ್ತನು.
ಮನೋಲಯವಾದಡೆ
ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು.
Art
Manuscript
Music
Courtesy:
Transliteration
Sakalēndriyaṅgaḷalli vikarisuva
manava seḷedu nindāta sukhi,
pan̄cēndriyaṅgaḷiccheyoḷu
manaṅgoṇḍu suḷivāta duḥkhi.
Manas'su bahirmukhavāgalu māyāprapan̄ci,
manavantarmukhavādaḍaviraḷa jñāni,
manavu mahadalli nindaḍāta muktanu.
Manōlayavādaḍe
saurāṣṭra sōmēśvara liṅgadalli abhēdyanu.