ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ.
ನಡೆದಡೆ ಗಮನವಿಲ್ಲ ನುಡಿದಡೆ ಶಬ್ದವಿಲ್ಲ
ದಗ್ಧಪಟನ್ಯಾಯವಾಗಿ.
ಉಂಡಡೆ ಉಪಾಧಿಯಿಲ್ಲ ಉಣದಿದ್ದಡೆ ಕಾಂಕ್ಷೆಯಿಲ್ಲ
ಯಥಾಲಾಭಸಂತುಷ್ಟನಾಗಿ.
ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ
ಅರಿವಿಲ್ಲ ಮರಹಿಲ್ಲ ನಾನೆಂಬ ನೆನಹಿಲ್ಲವಾಗಿ.
ಇದಕ್ಕೆ ಶ್ರುತಿ:
ಯತ್ಪ್ರಾಣೇ ಲಿಂಗಸಂಧಾನಂ ತಲ್ಲಿಂಗಂ ಪ್ರಾಣಸಂಯುತಂ
ಪ್ರಾಣಲಿಂಗದ್ವಯೋರ್ಭೇದೋ ನ ಭೇದಶ್ಚ ನ ಸಂಶಯಃ
ದಗ್ಧಾಂಬರಂ ಹಿ ಕರ್ಮಾಣಿ ಚೇಂದ್ರಿಯಾಣಿ ಮನೋ ವಚಃ
ಭಾವಸದ್ಭಾವನಿರ್ವಾಣಃ ಪರೇ ಯಸ್ಯ ವಿಲೀಯತೇ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು
ಲಿಂಗಪ್ರಾಣಿಗಳಾಗಿಅಂಗವ ಮರೆಗೊಂಡು
ಎಂತಿರ್ದಡಂ ಎಂತು ನಡೆದಡಂತೆ ಸಂತ.
Art
Manuscript
Music
Courtesy:
Transliteration
Suḷidaḍe oḍalilla nindaḍe neḷalilla.
Naḍedaḍe gamanavilla nuḍidaḍe śabdavilla
dagdhapaṭan'yāyavāgi.
Uṇḍaḍe upādhiyilla uṇadiddaḍe kāṅkṣeyilla
yathālābhasantuṣṭanāgi.
Stutiyilla nindeyilla naṇṭilla hageyilla
arivilla marahilla nānemba nenahillavāgi.
Idakke śruti:
Yatprāṇē liṅgasandhānaṁ talliṅgaṁ prāṇasanyutaṁ
prāṇaliṅgadvayōrbhēdō na bhēdaśca na sanśayaḥ
dagdhāmbaraṁ hi karmāṇi cēndriyāṇi manō vacaḥ
bhāvasadbhāvanirvāṇaḥ parē yasya vilīyatē
intendudāgi,
saurāṣṭra sōmēśvarana śaraṇaru
liṅgaprāṇigaḷāgi'aṅgava maregoṇḍu
entirdaḍaṁ entu naḍedaḍante santa.