Index   ವಚನ - 11    Search  
 
ಅಜಾತನನೊಲಿಸದೊಡೆ ಅದೇತರ ಮಂತ್ರ, ಅದೇತರ ಆಗಮ ಹೇಳಿರೋ, ಆಚಾರ್ಯ ಕೊಟ್ಟ ಶಲಾಕಿ ಯಾತರಲ್ಲಿ ನಚ್ಚುವಿರಿ? ಅದಾವ ಮುಖದಲ್ಲಿ, ಲಿಂಗ ಬಂದಿಪ್ಪುದು? ರೂಪಿಲ್ಲದಾತ ನಿಮ್ಮ ಮಾತಿಂಗೆ ಬಂದಡೆ, ಅದೇತರ ಮಾತೆಂದನಂಬಿಗರ ಚೌಡಯ್ಯ.