Index   ವಚನ - 13    Search  
 
ಅಡವಿಯ ಹೊಗಿಸಿತ್ತು, ಹುಡುಕುನೀರಲದ್ದಿತ್ತು, ಜಡೆಗಟ್ಟಿ ಭಸ್ಮವ ತೊಡೆಸಿತ್ತು, ಉಡೆವುಚ್ಚುಗೊಳಿಸಿತ್ತು, ಹಿಡಿದೊತ್ತಿ ಕೇಶವ ಕೀಳಿಸಿತ್ತು, ಪಡಿಪುಚ್ಚಗೊಳಿಸಿತ್ತು ಊರೊಳಗೆಲ್ಲ. ಈ ಬೆಡಗಿನ ಮಾಯೆಯ ಬಡಿಹಾರಿ ಸಮಯಿಗಳ ನುಡಿಗೆ ನಾಚುವೆನೆಂದನಂಬಿಗರ ಚೌಡಯ್ಯ.