Index   ವಚನ - 16    Search  
 
ಅತ್ಯಾಹಾರವನುಂಡು ಹೊತ್ತುಗಳೆದು, ಹೋಕಿನ ಮಾತನಾಡುತ್ತ ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ, ಮತ್ತೆ ಶಿವನ ನೆನೆದೆನೆಂದಡೆ ಶಿವನ ವರ ಎತ್ತಲೆಂದರಿಯದೆಂದಾತ, ನಮ್ಮಂಬಿಗರ ಚೌಡಯ್ಯ.