ಊರದ ಚೇಳಿನ ಏರದ ವಿಷಕ್ಕೆ,
ನರಳಿ ಹೊರಳಿತ್ತು ಮೂರುಲೋಕ!
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು
ಮುಟ್ಟದೆ ಹೂಸಲು; ಮಾಬುದು-ಗುಹೇಶ್ವರಾ.
Transliteration Ūrada cēḷina ērada viṣakke,
naraḷi horaḷittu mūrulōka!
Huṭṭada giḍuvina biṭṭa eleya tandu
muṭṭade hūsalu; mābudu-guhēśvarā.
Hindi Translation बिना दंशन बिच्छु से बिना चढे विष दर्द से
तीनों लोक कराह रहे हैं।
बिना पैदा पौधे में लगे पत्ते लाकर,
बिना स्पर्श किये सूंघने से कुछ नहीं होता गुहेश्वरा।
Translated by: Eswara Sharma M and Govindarao B N
Tamil Translation கொட்டாத தேளின், ஏறாத துன்பத்தில்
மூவுலகும் துன்புற்றது
தோன்றாச் செடியின் துளிர்களைத் தருவித்து
தீண்டாது பூசின் அகலும் குஹேசுவனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಊರು = ಕಡಿ, ಕಚ್ಚು; ಏರು = ಮೇಲೆ ಏರು, ವ್ಯಾಪಿಸು; ಚೇಳು = ವ್ಯಾಮೋಹಕಾರಿಯಾದ ವೈಷಯಿಕ ಸಂಸಾರ; ನರಳು = ಬಾಧೆಹೊಂದು, ತಾಪದಿಂದ ಬಳಲು; ಪೊಸಲು = ಅಂಗವಿಸಿಕೊಂಡರೆ; ಬಿಟ್ಟೆಲೆ = ಆ ಪರಮಾತ್ಮನೆ ನಾನು ಎಂಬ ಜ್ಞಾನ; ಬೇನೆ = ದುಃಖ, ಬಾಧೆ; ಮಾಬುದು = ಸಾಂಸಾರಿಕ ಬಾಧೆ ಇಲ್ಲದಾಗುವುದು; ಮುಟ್ಟದೆ = ಪವಿತ್ರ ಭಾವದಿಂದ; ಮೂರು ಲೋಕ = ಅತಿ ಸುಖಿಗಳು, ಅತಿ ದುಃಖಿಗಳು ಹಾಗೂ ಸುಖ-ದುಃಖಮಿಶ್ರಿತರು; ಹುಟ್ಟಿದ ಗಿಡ = ಜನ್ಮ-ಮರಣಗಳಿಲ್ಲದ ಪರಮಾತ್ಮ;
Written by: Sri Siddeswara Swamiji, Vijayapura