•  
  •  
  •  
  •  
Index   ವಚನ - 374    Search  
 
ಜ್ಞಾನಚಕ್ರ: ಪರಮತತ್ತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ-ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ. ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ, ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹಾಸ್ಥಳವೇ ಸೀತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ- ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊರ್ಧ್ವದ ಪವನ; ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ ಇಹಲೋಕವೇನು? ಪರಲೋಕವೇನು? ಅಲ್ಲಿಂದತ್ತ ಅಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
Transliteration Jñānacakra: Paramatattva paramajñāna paramārtha parāpara vāṅmanakkagōcara śabdagambhīra upamātīta, unnata paraśiva, jñānajyōti sujñānada prabheya beḷaginoḷage suḷidāḍuva paramānandada mahāmahimaṅge, śivajñānave śr̥ṅgāra, mahābeḷage vibhūti, pan̄cabrahmave darśana gaganasthānave kanthe, ākāśave ṭoppara, ajāṇḍa-brahmāṇḍave karṇakuṇḍala, ādi ādhārave kakṣapāḷa anāhatave oḍyāṇa, advaitave yōgavaṭṭige, agamyave yōgavāvuge, acaḷitave kharpara, aprāmaṇave lākuḷa,Avicārave suḷuhu, akalpitave bhikṣe, koṇḍude gamana, nindude nivāsa. Niścintavemba āśramadalli nirākuḷavemba Akhaṇḍitave aḍake, ēkōbhāvave ele, śud'dhaśivācārave suṇṇa- vivēka vicāradinda vīḷeyavanavadharisūdu. Mahāliṅgada pariṇāmave prasāda, samyak jñānave santōṣa. Sahaja nirābhārigaḷa mēḷadinda, nis'sīmada nibhrāntina susaṅgadalli nirāśāpadave anukūla, niśśabdave anubhāva, anupamada niśśūn'yave viśrāma, nirākārave gamana. Nirantara pātāḷa ūrdhvada pavana; tribhuvanagiriyemba parvatavanēri, sinhāsanavanikki, gaganagambhīrada bāviyoḷage agōcarada agghaṇiya tandu mahāghanaprāṇaliṅgakke maṅgaḷada beḷaginalli majjanakkeredu; bindvākāśave gandha, mahadākāśave akṣate, parāparave patrepuṣpa, nirmaḷave liṅgārcane, mahāprakāśave pūje, nityaniran̄janave dhūpadīpārati, sakala bhuvanādibhuvanaṅgaḷe sayadāna, ācārave arpita, mahāsthaḷavē sītāḷa, Kāyavemba kadaḷiya hokku suḷidāḍuva paramānandada mahāmahimaṅge ihalōkavēnu? Paralōkavēnu? Allindatta agamya nirāḷa paramajñānada sid'dhi mahāliṅgada beḷagu, guhēśvarā, nim'ma nijavanarida mahāmahima śaraṇaṅge, namō namō embenu
Hindi Translation परमतत्व परमार्थ परम ज्ञान परापर वाङमय से अगोचर शब्द गंभीर उपमातीत उन्नत पर शिवज्ञान ज्योतिसुज्ञान प्रभा प्रकाश के अंदर घूमते परमानंद महामहिम को शिवज्ञा नही शृगार, महा प्रकाश ही विभूति, पंचब्रह्म ही दर्शन, गगन स्थान ही कफनी, आकाश ही टोपी, भव्य ब्रम्हांड ही कर्णकुंडल , आदि आधार ही बटुआ, अनाहत ही मेखला, अद्वैत ही योगवस्त्र, अगम्य ही पादुका अचलत्व हि भिक्षापात्र अप्राण ही योगदंड, अविचार ही सूझ, अकल्पित ही भिक्षा, खरीदना ही गमन, मनकी स्थिति निवास! निश्चिंता श्रम में निरामय नामक सिंहासन रखकर, गगन गंभीर कुऎ में अगोचर अग्घवणि लाकर, महा घन प्राण्लिंग को मंगल प्रकाश मॆं अभिषेक कर- बिंद्वाकाश ही गंघ, महदाकाश ही अक्षता, परापर ही पत्रपुष्प, निर्मल ही लिंगार्चन, महाप्रकाश ही पूजा, नित्य निरंजन ही धूपदीपारति, सकल भुवनादि भुवन भोग, आचार ही अर्पित ,महत्व ही शुद्धजल अखंडित ही सुपारी , एको भाव ही पान, शुद्ध शिवाचार ही नैवेद्य का चूना, विवेक विचार से तांबूल स्वीकार ना। महालिंग परिणाम ही प्रसाद , सम्यकज्ञान ही संतोष ; विरक्तों के मेल से , निःसीम महिमान्वित सुसंग में , निराशा पद ही अनुकूल, निःशब्द ही अनुभाव , अनुपम निःशून्य ही विश्राम, निराकार ही गमन, निरंतर पाताळ ऊर्ध्व पवन। त्रिभूवन गिरि जैसे पर्वत चढकर, शरीर जैसे कदली में घुसकर घूमनेवाले महामहिम को इहलोक क्या? परलोक क्या? वहाँ से उधर अगम्य , निराल परम ज्ञान सिद्धि महालिंग प्रकाश गुहेश्वरा, तुम्हारी निज स्थिति जाने महामहिम शरण को नमो नमो कह रहा हूँ। Translated by: Eswara Sharma M and Govindarao B N
Tamil Translation ஞானசக்கரம் பரம தத்துவம், மெய்ப்பொருள், பரமஞானம், பரம்பொருள் சொல், மனத்திற்கு எட்டாதவன், அமைதி வடிவினன் உவமிக்கவியலா, மேன்மையான பரசிவஞானஒளி ஞானப் பேரொளியின் ஒளியில் சுழன்றாடும் பேரின்ப வடிவினன். மிகச் சிறந்தவனுக்கு சிவஞானமே அணிகலனாம் பேரொளியே திருநீறு ஐந்து பிரம்மமே முகமாம், வெட்டவெளி அவனுடைய கந்தை ஆகாயமே தொப்பி, பிரம்மாண்டம் கர்ணகுண்டலம் ஆதி ஆதாரமே கட்கப்பை அனாஹதமே ஒட்டியாணம். அத்துவைதமே அபேத உணர்வெனும் யோகத்துகில், சிவன் அறிவிற்கு எட்டாதவன் எனும் அறிவு பாதுகை, உறுதியாக இருப்பது திருவோடு, அளக்கவியலாதவன் என்பது யோகதண்டம் கவலையின்மையே அவனுடைய சஞ்சாரம், சிவன் கற்பனைக்கு எட்டாதவனென்பது பிட்சை, அத்தகைய பிட்சையைக் கைக்கொள்வதே தேச சஞ்சாரம் அசையாத மனமே வாழுமிடம், கவலையின்மை எனும் ஆசிரமத்தில், சோர்வின்மை எனும் அரியணையை இருத்தி ஆகாய கம்பீரமெனும் வாவியிலியிருந்து கண்ணிற்குப் புலப்படாத தன்மையெனும் நீரைச் சேந்தி, பரம்பொருளாம் பிராணலிங்கத்திற்கு மங்கலகரமான அதிகாலையில் திருமஞ்சனம் செய்து உடலிலே சிவ உணர்வு நிறைந்துளதெனும் கந்தம் பிரம்மாண்டமெங்கும் சிவவயல் நிறைந்துள்ளது எனும் உணர்வு அட்சதை, பராபரம் எனும் இலை, மலர் நிர்மலமே இலிங்கார்ச்சனை, மனத்தின் ஞானஒளியே பூஜை அழிவற்றவன், எத்துடனும் தொடர்பற்றவனெனும் நறுமணப் புகை, ஆரத்தி, எல்லா உலகங்களும் படையல் நன்னெறியே அர்ப்பித்தல், இலிங்கமே சிறந்ததெனும் உணர்வே தூய நீர், இலிங்கம் முழுமையானதெனுமுணர்வே பாக்கு, ஒரு முனைப்பாடே வெற்றிலை, தூய சிவாசாரமே பலவிதபொருட்களுடன் கூடிய சுண்ணம் விவேக மனத்துடன் வெற்றிலையை ஏற்குமாறு இலிங்கத்திடம் விண்ணப்பித்து, மஹாலிங்கம் நிறைவுடையது என்னும் உணர்வே பிரசாதம், அப்பொழுது ஏற்படும் ஞானமே இன்பம் இயல்பாகத் துறந்தோர் தம் தொடர்பொடு எல்லையற்றவன், மெய்ஞானத்திற்கு ஊட்டமளிக்கும் நல்லோர் தொடர்புடன், பற்றற்றோரின் தொடர்புடன் இன்பமுற்று, கவலையற்ற இருப்பே அவன் நன்னிலையாம் தன்னை மறந்த நிலையின் இன்பநிலை, மோனநிலை உவமிக்கவியலா சூனிய நிலையைத் துய்ப்பதே ஓய்வாம் அவன் செல்வது சிவ வழியாம். மன ஆழத்தில் வாயுவை நிறுத்தி, திரிபுவனகிரி எனும் மலையேறி உடலெனும் கதலியிலே சுழலும் மகிமையுடையோனுக்கு இக உலகமென்ன? பர உலகமென்ன? எங்கெங்கும் அறிவிற்கெட்டா, அமைதி வடிவான மெய்ஞ்ஞானமுற்ற மகாலிங்கப் பேரொளி!குஹேசுவரனே உம்மை உணர்ந்த பெரியோன் சரணனுக்குத் தலை வணங்குகிறேன் ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಕಪ್ಲಿತವೆ ಭಿಕ್ಷೆ = ಶಿವನು ಕಲ್ಪನೆಗೆ ನಿಲುಕದವ ಎಂಬ ಭಾವವು ಭಿಕ್ಷೆ(ಭಿಕ್ಷಾನ್ನ); ಅಖಂಡಿತವೆ ಅಡಿಕೆ = ಲಿಂಗವು ಪರಿಪೂರ್ಣ ಎಂಬ ಭಾವವೆ ಅಡಿಕೆ; ಅಗಮ್ಯವೆ ಯೋಗವಾವುಗೆ = ಶಿವನು ಗಮ್ಯವಲ್ಲ ಎಂಬ ತಿಳಿವು ಹಾವುಗೆ; ಅಚಳಿತವೆ ಖರ್ಪರ = ಅಚಳ-ಸ್ಥಿರ ಎಂಬುದು ಭಿಕ್ಷಾಪಾತ್ರೆ; ಅಜಾಂಡ-ಬ್ರಹ್ಮಾಂಡವೆ = ಭವ್ಯವಾದ ಈ ಬ್ರಹ್ಮಾಂಡವೆ ಕರ್ಣ ಕುಂಡಲ; ಅದ್ವೈತವೆ ಯೋಗವಟ್ಟಿಗ = ಅಭೇದಭಾವನೆಯ ಯೋಗವಸ್ತ್ರ; ಅನಾಹತವೆ ಒಡ್ಯಾಣ = ಓಂಕಾರ ಪ್ರಣವನಾದವೆ ನಡುಕಟ್ಟು; ಅಪ್ರಮಾಣವೆ ಲಾಕುಳ = ಅಳತೆಗೆ ನಿಲುಕ ದುದು ಶಿವ ಎಂಬ ಭಾವವು ಯೋಗದಂಡ; ಅವಿಚಾರವೆ ಸುಳುಹು = ಯಾವ ವಿಚಾರವೂ ಇಲ್ಲದ ನಿರ್ವಿಚಾರಸ್ಥಿತಿಯು ಆತನ ಚಲನ-ವಲನ; ಆಕಾಶವೆ ಟೊಪ್ಪರ = ನೀಲಾಕಾಶವು ಕಿವಿಟೊಪ್ಪಿಗೆ; ಆಚಾರವೆ ಅರ್ಪಿತ = ಸದಾಚಾರವೆ ಅರ್ಪಿತಗೊಳಿಸುವ ಕ್ರಿಯೆ, ಅರ್ಪಣೆ; ಆದಿ ಆಧಾರವೆ ಕಕ್ಷಪಾಳ = ವಿಶ್ವಮೂಲವೂ ವಿಶ್ವಾಧಾರವೂ ಆದ ಶಿವತತ್ತ್ವವು ಬಗಲುಚೀಲ; ಉನ್ನತ = ಮೂವತ್ತಾರು ತತ್ವ್ತಗಳಿಂದ ಮೇಲಿರುವ; ಉಪಮಾತೀತ = ಉಪಮೆಗೆ ನಿಲುಕದ, ಉಪಮೆಯನ್ನು ಕೊಡಲಿಕ್ಕಾಗದ, ಉಪಮೆಯಿಂದ ಸಂಪೂರ್ಣವಾಗಿ ನಿರ್ದೇಶಿಸಲಿಕ್ಕಾಗದ.; ಏಕೋಭಾವವೆ ಎಲೆ = ಲಿಂಗಭಿನ್ನವಾಗಿ ಯಾವುದೂ ಇಲ್ಲ, ಎಲ್ಲವೂ ಲಿಂಗವೆ ಎಂಬ ಭಾವವೆ ಎಲೆ; ಕೊಂಡುದೆ ಗಮನ = ಆ ಅಕಲ್ಪಿತ ಭಾವಭಿಕ್ಷೆಯನು ಕೈಕೊಂಡುದುದೆ ದೇಶಸಂಚಾರ; ಗಗನಸ್ಥಾನವೆ ಕಂಥೆ = ಬಯಲು ಆತನ ಜೋಳಿಗೆ; ಜ್ಞಾನಜ್ಯೋತಿ = ತೇಜೋಮೂರ್ತಿ; ನಿಂದುದೆ ನಿವಾಸ = ಮನವು ನಿಂದುದೆ ನಿವಾಸ; ನಿಃಶಬ್ದವೆ ಅನುಭಾವ = ಅನುಭಾವ-ತಾನು ತನ್ನಲ್ಲಿ ನೆಲೆಸಿದಾಗ ಉಂಟಾಗುವ ಆನಂದಾನುಭವ; ನಿಃಸೀಮ = ಸೀಮೆಗೆ ಒಳಪಡದ, ಮಹಿಮಾನ್ವಿತ; ನಿತ್ಯ ನಿರಂಜನವೆ ಧೂಪ = ಪರಮಾತ್ಮನು ನಿತ್ಯ ಹಾಗೂ ನಿರಂಜನ ಎಂಬುದೆ ಧೂಪ ಹಾಗೂ ದೀಪಾರತಿ; ನಿಭ್ರಾಂತಿನ ಸುಸಂಗದಲ = ಜ್ಞಾನಶೀಲ, ಸತ್ಯಜ್ಞಾನಕ್ಕೆ ಪೋಷಕವಾದ ಸಂಗಸುಖದಲ್ಲಿ; ನಿರಂತರ ಪಾತಾಳ ಊರ್ಧ್ = ಅವನ ಅಂತರಾಳದೊಳಗೆ ಪವನಸ್ತಂಭನ; ನಿರಾಕಾರವರೆ ಗಮನ = ಆ ಶಿವಯೋಗಿಯು ಅಂತರ್ಮುಖಿ; ನಿರಾಶಾಪದವೆ ಅನುಕೂಲ = ಆ ಶಿವಯೋಗಿಯು ಸಹಜ ನಿರಾಭಾರಿಗಳ ಮೇಳದಲ್ಲಿ, ಅವರ ಸುಶ್ರೇಷ್ಠವಾದ ಜ್ಞಾನಪೂರ್ಣವಾದ ಸಂಗದಲ್ಲಿ ಸುಖಿಸುತ್ತಾನೆ, ನಿಶ್ಚಿಂತ; ನಿರ್ಮಳವೆ ಲಿಂಗಾರ್ಚನ = ಪರಮಾತ್ಮನೆ ನಿರ್ಮಳ ಎಂಬ ಭಾವವು ಲಿಂಗಾರ್ಚನೆ; ಪಂಚಬ್ರಹ್ಮವೆ ದರ್ಶನ = ಬ್ರಹ್ಮ, ವಿಷ್ಣು, ರುದ್ರ, ಈಶ್ವರ ಮತ್ತು ಸದಾಶಿವ-ಇವರೇ ಪಂಚಬ್ರಹ್ಮರು; ಶಿವನ ಸದಾದಿ ಪಂಚಲಕ್ಷಣಗಳ ಮೂರ್ತತತ್ವ್ತಗಳು ಇವ; ಪರಮಜ್ಞಾನ = ಕೇವಲ ಅರಿವು, ಜ್ಞಾನಘನ; ಪರಮತತ್ವ್ತ = ಆತ್ಯಂತಿಕ ಸತ್ಯ; ಪರಮಾರ್ಥ = ಶ್ರೇಷ್ಠ ಪುರುಷಾರ್ಥ; ಪರಶಿವ = ಪರಶಿವನು, ಪರಮಾತ್ಮನು; ಸೃಷ್ಟಿಯ ಮೊದಲ ತತ್ವ್ತವು ಬಿಂದು, ಅದಕ್ಕೆ ಶಿವ ಎಂಬ ನಾಮ, ಈ ಶಿವತತ್ವ್ತಕ್ಕೆ ಪರವಾದುದರಿಂದ ಅ; ಪರಾಪರ = ಪರಾತ್ಪರ ಪರಾತ್-ಪರ ಶ್ರೇಷ್ಠಕ್ಕಿಂತ ಶ್ರೇಷ್ಠ; ಸ್ಪಷ್ಟವಾದ ವಿಶ್ವಕ್ಕೆ ಅದರ ಮಹಾಕಾರಣವಾದ ಮಹಲಿಂಗವು ಪರ, ಅದಕ್ಕೆಯೂ ಪರ; ಪರಾಪರವೆ ಪತ್ರೆ ಪುಷ್ = ಪರ ಎಂದರೆ ಚೇತನ, ಅಪರ ಎಂದರೆ ಅಚೇತನ, ಈ ಎರಡು ತತ್ವ್ತಗಳೆ ಪತ್ರೆ-ಪುಪ್ಷಗಳು; ಬಿಂದ್ವಾಕಾಶವೆ ಗಂಧ = ಪಿಂಡದೊಳಗೆಲ್ಲ ಶಿವಬಯಲು ತುಂಬಿದೆ ಎಂಬ ಭಾವವು ಗಂಧ; ಬೆಳಗಿನೊಳಗೆ = ಆ ತೇಜೋಮೂರ್ತಿ ಪರಶಿವನ ಜ್ಞಾನ ಬೆಳಗಿನೊಳಗೆ; ಬೆಳಗು = ಅಲ್ಲಿಂದಾಚೆ ಮಹಲಿಂಗದ ಬೆಳಗು; ಮಹತ್ವವೆ ಸಿತಾಳ = ಲಿಂಗವು ಶ್ರೇಷ್ಠವಾಗಿದೆ ಎಂಬ ಭಾವನೆ ಸೀತಾಳ(ಶುದ್ದನೀರು); ಮಹಾದಾಕಾಶವೆ ಅಕ್ಷತೆ = ಬ್ರಹ್ಮಾಂಡದೊಳಗೆಲ್ಲ ಶಿವಬಯಲು ತುಂಬಿದೆ ಎಂಬ ಭಾವವು ಅಕ್ಷತೆ; ಮಹಾಪ್ರಕಾಶವೆ ಪೂಜೆ = ಅಂತರಂಗದ ಜ್ಞಾನಬೆಳಗೆ ಪೂಜೆ; ಮಹಾಬೆಳಗೆ ವಿಭೂತಿ = ಅವನ ಅಂತರಂಗದಲ್ಲಿ ಹೊಳೆವ ಶಿವೋsಹಂಭಾವಬೆಳಗು ಅವನಿಗೆ ವಿಭೂತಿ; ಮಹಾಮಹಿಮ = ಮಹಾಮಹಿಮನು, ಆನಂದಮೂರ್ತಿಯು ಅವನು ಶಿವಯೋಗಿ; ಮಹಾಲಿಂಗದ ಪರಿಣಾಮವೆ = ಮಹಾಲಿಂಗವು ನಿತ್ಯತೃಪ್ತವಾಗಿದೆ ಎಂದು ಭಾವಿಸುವುದು ಪ್ರಸಾದ, ಅದನ್ನು ಶಿವಯೋಗಿಯು ಸ್ವೀಕರಿಸುವುದು; ವಾಙ್ಮನಕ್ಕಗೋಚರ = ವಾಕ್ ಮತ್ತು ಮನಸ್ಸುಗಳಿಗೆ ಗೋಚರವಾಗದದು; ವಿವೇಕವಿಚಾರದಿಂದ ವೀಳ = ಸತ್ಯಗ್ರಾಹಿಯಾದ ಮನಸ್ಸಿನಿಂದ ವೀಳೆಯವನ್ನು ಸ್ವೀಕರಿಸು ಎಂದು ಬಿನ್ನವಿಸುವುದು ಲಿಂಗದಲಿ; ವಿಶ್ರಾಮ = ಉಪಮೆಗೆ ನಿಲುಕದ ಈ ನಿಶ್ಯಬ್ದ ಸ್ಥಿತಿಯೆ ನಿಶ್ಯೂನ್ಯತಾ; ಶಬ್ದಗಂಭೀರ = ಶಬ್ದವು ಅಡಗಿದ ನಿಶ್ಯಬ್ದರೂಪ; ಶಿವಜ್ಞಾನವೆ ಶೃಂಗಾರ = ಪರಶಿವನ ಅಪರೋಕ್ಷಜ್ಞಾನವೆ ಶಿವಯೋಗಿಯ ಅಲಂಕರಣ.; ಶುದ್ದಶಿವಾಚಾರವೆ ಸುಯ = ಎಲ್ಲವೂ ಶಿವನಿಗಾಗಿಯೆ ಎಂಬುದು ಶಿವಾಚಾರ, ಇದುವೆ ವಿವಿಧ ಸಾಮಗ್ರಿಗಳಿಂದ ಕೂಡಿದ ಸುಣ್ಣ; ಸಕಲ ಭುವನಾದಿ ಭುವನಂಗ = ಸ್ಥೂಲಸೂಕ್ಷ್ಮವಾದ ಎಲ್ಲ ತತ್ವ್ತಗಳು, ಆ ತತ್ವ್ತಗಳಿಂದ ನಿರ್ಮಾಣಗೊಂಡ ಅಸಂಖ್ಯಭುವನಂಗಳು ಲಿಂಗಕ್ಕೆ ಎಡೆ, ನೈವೇದ್ಯ; ಸಮ್ಯಕ್ ಜ್ಞಾನವೆ ಸಂತ = ಆಗ ಉಂಟಾಗುವ ಸಮ್ಯಕ್-ನಿಜ ಜ್ಞಾನವೆ ಸಂತೋಷ; ಸಹಜ ನಿರಾಭಾರಿಗಳು = ಲೌಕಿಕ ಹೊರೆಯಿಲ್ಲದವರು, ವಿರಕ್ತರು, ಯಾವುದಕ್ಕೂ ಅಂಟಿಕೊಳ್ಳದ ಮನಸ್ಸುಳ್ಳವರು, ಶಿವಯೋಗಿಗಳು; ಸುಳಿದಾಡುವ = ವಿಹರಿಸುವ; Written by: Sri Siddeswara Swamiji, Vijayapura