Index   ವಚನ - 44    Search  
 
ಆರೂ ಇಲ್ಲದಂದು ತಾನಹ ದೆವಸ, ತನಗೆ [ಆ]ನಾಧಾರವಾದೆ ನೋಡಾ. ಭೂಮಿಯಾಕಾಶ ಐದನೆಯ ಭೂತ ಒಳಗಾಗಿ [ಆಂ] ಬೇರೆ ತಾ ಬೇರೆ ಬಳಿಕಾದ ದೆವಸ, ತಾ ತೋರಿದಂದಹ ಆ ನೂಲ ಹಿಡಿದೆನು. ತೀವಿದ ಒಂಬತ್ತು ದ್ವೀಪಕ್ಕೆ ಭಾವವಿರಹಿತನಾಗಿ ತಾ ಹೊರಗಾದಡೆ, [ಆಂ] ಹಿಡಿದೊಳಗುಮಾಡಿದನೆಂದನಂಬಿಗರ ಚೌಡಯ್ಯ.