Index   ವಚನ - 61    Search  
 
ಎಲ್ಲರೊಳಗೆ ಗೆಲ್ಲ ಸೋಲಕ್ಕೆ ಹೋರಬಂದೆನೆ? ಬೆಲ್ಲವ ಮೆದ್ದಡೆ ತಮ್ಮ ತಮ್ಮ ಬಾಯಲ್ಲಿಗೆಲ್ಲ ಸಿಹಿ. ಬಲ್ಲವನಾದ ಮತ್ತೆ ನಾಡೆಲ್ಲರೂ ಕೂಡಿ ಬಾಳದ ಹೆಣ್ಣಿಗೆ ನ್ಯಾಯವನಾಡುವಂತೆ, ಅರಿದ ಅರಿವಿಂಗೆ ಮರೆದ ಮರವೆಗೆ ತನ್ನಲ್ಲಿದ್ದು ಕರಿಗೊಂಡವನೆ ಸಾಕ್ಷಿಯೆಂದನಂಬಿಗರ ಚೌಡಯ್ಯ.