ಎಲ್ಲಾ ದೇವರಿಗೆ ಮಸ್ತಕದ ಪೂಜೆ,
ನಮ್ಮ ಗುರುಲಿಂಗಜಂಗಮದೇವರಿಗೆ
ಪಾದಾಂಗುಷ್ಟದ ಪೂಜೆಯೆಂಬುದು
ಸಕಲ ವೇದಶಾಸ್ತ್ರಪುರಾಣಾಗಮಂಗಳು,
ಶ್ರುತಿಸ್ಮೃತಿಗಳು ಸಾರುತ್ತಿರಲು,
ಅದನರಿತು ಓದುತ್ತ ಓದುತ್ತ ಹಾಡುತ್ತ ಹಾಡುತ್ತ
ಅದಕ್ಕೆ ಅಪಖ್ಯಾತಿಯ ತರುವವನೆಂತು ಜಂಗಮವೊ?
ಅವನೆಂತು ಭಕ್ತನೊ?
ತಾನೊಡೆಯ[ನಂ]ತೆ, ತಾ ಭಕ್ತನಂತೆ,
ತನ್ನೆಡೆಯ ಗುಡಿಯ ಲಿಂಗದ ಮುಂದಿಟ್ಟು
ತನ್ನಿಷ್ಟಲಿಂಗಕ್ಕೆ ಕೊಟ್ಟು ಕೊಂಬ
ತುಡುಗುಣಿ ನಾಯ ಮೂಳಹೊಲೆಯರ ಕಂಡಡೆ
ನಡುವಿನ ಮೇಲೆ ಒದೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.