Index   ವಚನ - 105    Search  
 
ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ, ಅರಿವೆಂಬೆನೆ ಕಾಣಬಾರದ ಬಯಲು, ಒಂದನಹುದು ಒಂದನಲ್ಲಾಯೆಂದು ಬಿಡಬಾರದು. ಬಿಟ್ಟಡೆ ಸಮಯವಿಲ್ಲ, ಜಿಡ್ಡ ಹಿಡಿದಡೆ ಜ್ಞಾನವಿಲ್ಲ, ಉಭಯದ ಗುಟ್ಟಿನಲ್ಲಿ ಕೊಳೆವುತ್ತಿದೇನೆ ಎಂದನಂಬಿಗರ ಚೌಡಯ್ಯ.