Index   ವಚನ - 118    Search  
 
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು? ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು? ಅವು ತಮ್ಮ ಅಂಗದ ಸ್ವಭಾವದಂತೆ. ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗರ ಚೌಡಯ್ಯ.