Index   ವಚನ - 120    Search  
 
ಗಿಡುವಿನ ಪುಷ್ಪವ ಕೊಯ್ಯೆನು, ಮಡುವಿನಗ್ಘವಣಿಯ ತುಳುಕೆನು, ಸ್ಥಾವರಂಗಳ ಪೂಜಿಸೆನು.ಕೇಳು ಕೇಳು ನಮ್ಮಯ್ಯಾ; ಮನದಲ್ಲಿ ನೆನೆಯೆ, ವಚನಕ್ಕೆ ತಾರೆ, ಹೊಡವಂಟು ಬೇರು ಮಾಡುವವನಲ್ಲ. ಬಸುರೊಳಗಿರ್ದು ಕಾಲನಿಡುವ ಬುದ್ಧಿ ಕೂಡದೆಂದನಂಬಿಗರ ಚೌಡಯ್ಯ.