Index   ವಚನ - 133    Search  
 
ಜಾತಿಭ್ರಮೆ, ನೀತಿಭ್ರಮೆ ಎಂಬ ಕರ್ಮಂಗಳನು ಘಾತಿಸಿ ಕಳೆಯಬಲ್ಲಡಾತ ಯೋಗಿ. ಕ್ಷೇತ್ರಭ್ರಮೆ, ತೀರ್ಥಭ್ರಮೆ, ಪಾಷಾಣಭ್ರಮೆ ಎಂಬ ಕರ್ಮಂಗಳನು ನಿಃಕರಿಸಿ ಕಳೆಯಬಲ್ಲಡಾತ ಯೋಗಿ. ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ ಎಂದಾತನಂಬಿಗರ ಚೌಡಯ್ಯ.