ಕಾಯದಲ್ಲಿ ಕಳವಳವೆಡೆಗೊಂಡ ಬಳಿಕ,
ಅರಿವಿನಲ್ಲಿ ಮರವೆ ತಾನೆ ನಿಂದಿತ್ತು ನೋಡಾ.
ಕಾಯದ ಕಳವಳವ ವಾಯವೆಂದರಿಯ ಬಲ್ಲಡೆ
ದೇವ ಗುಹೇಶ್ವರನ ನಿಲುವು ತಾನೆ ನೋಡಾ.
Transliteration Kāyadalli kaḷavaḷaveḍegoṇḍa baḷika,
arivinalli marave tāne nindittu nōḍā.
Kāyada kaḷavaḷava vāyavendariya ballaḍe
dēva guhēśvarana niluvu tāne nōḍā.
Hindi Translation शरीर में दुःख प्राप्त होने के बाद
ज्ञान में भूल खुदस्थित हुआ था देखो।
शरीर दुःख अर्थहीन जाने तो
देव गुहेश्वर की स्थित खुद देखो।
Translated by: Eswara Sharma M and Govindarao B N
Tamil Translation மனத்திலே மருட்சி நிலைகொண்டதெனின்
அறிவிலே மறதி தானே நிலைக்கும் காணாய்
மனத்தின் மருட்சி பொருளற்றதென அறியவியலின்
இறைவன் குஹேசுவரனின் நிலையன்றோ காணாய்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿಯಬಲ್ಲಡೆ = ಖಚಿತವಾಗಿ ತಿಳಿಯುವುದಾದರೆ, ಅದು; ಅರಿವಿನಲ್ಲಿ = ಜೀವಾತ್ಮನಲ್ಲಿ; ಎಡೆಗೊಂಡ ಬಳಿಕ = ಸ್ಥಾನ ಪಡೆದರೆ; ಕಳವಳವ = ಚಿಂತೆ-ಭ್ರಾಂತಿಗಳನ್ನು; ಕಳವಳವು = ವ್ಯಥೆ, ಚಿಂತೆ, ಭ್ರಾಂತಿ; ಕಾಯದ = ಮನಸ್ಸಿನ ; ಕಾಯದಲ್ಲಿ = ದೇಹಸ್ಥ ಮನಸ್ಶಿನಲ್ಲಿ; ಗುಹೇಶ್ಶರನ ನಿಲವು ತಾ = ಪರಮಾತ್ಮನ ನಿಜ ನಿಲವು; ನಿಂದಿತ್ತು = ನೆಲೆಸಿರುತ್ತದೆ; ಮರವೆ ತಾನೆ = ತನ್ನ ನಿಜಸ್ವರೂಪದ ಮರೆವೆಯೊಂದೆ; ವಾಯವೆಂದು = ಅನಗತ್ಯ ಹಾಗು ಅರ್ಥಹೀನವೆಂದು ;
Written by: Sri Siddeswara Swamiji, Vijayapura