Index   ವಚನ - 150    Search  
 
ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ ನಿಮಗೆ ಗುರುವಾದನೈಸೆ? ಸತ್ಯಸದಾಚಾರವ ಬಲ್ಲಡೆ ತತ್ವಜ್ಞಾನವ ಬೋಧಿಸಿ, ಆ ಮಹಾಲಿಂಗಕ್ಕೂ ನಿಮಗೂ ಸಂಬಂಧವ ಮಾಡದಿಹ ಕತ್ತೆ ಗುರುವಿನ ಪಾದವ ಹಿಡಿದು ಕೆಟ್ಟಿರಲ್ಲಾ! ಹತ್ತಿಲಿದ್ದ ಲಿಂಗವ ಕಿರಿದು ಮಾಡಿ, ಕ್ಷೇತ್ರದ ಲಿಂಗವ ಹಿರಿದು ಮಾಡಿ; [ಕಂಕುಳ ಹತ್ತಿದ] ಲಿಂಗವ ಕಿರಿದು ಮಾಡಿ, ಕೊಂಕಣ ಹತ್ತಿ ಲಿಂಗವ ಹಿರಿದು ಮಾಡಿ; ಎಂತುಟೋ ನಿನ್ನ ಲಿಂಗವ ಕೊಡಲಾರದಿದ್ದಡೆ! ಹರುಗೋಲು ಹೊರಲಾರ, ಭೋಂಕನೆ ಮುಳುಗುವನೆಂದಾತ ನಮ್ಮ ಅಂಬಿಗರ ಚೌಡಯ್ಯ.