•  
  •  
  •  
  •  
Index   ವಚನ - 388    Search  
 
ಕರಣಾದಿ ಗುಣಂಗಳಳಿದು ನವಚಕ್ರಂಗಳು ಭಿನ್ನವಾದ ಬಳಿಕ ಇನ್ನೇನೊ? ಇನ್ನೇನೊ? ಪುಣ್ಯ-ಪಾಪವಿಲ್ಲ ಇನ್ನೇನೊ? ಇನ್ನೇನೊ? ಸ್ವರ್ಗ-ನರಕವಿಲ್ಲ ಇನ್ನೇನೊ? ಇನ್ನೇನೊ? ಗುಹೇಶ್ವರಲಿಂಗವ ವೇಧಿಸಿ ಸುಖಿಯಾದ ಬಳಿಕ ಇನ್ನೇನೊ? ಇನ್ನೇನೊ?
Transliteration Karaṇādi guṇaṅgaḷaḷidu navacakraṅgaḷu bhinnavāda baḷika innēno? Innēno? Puṇya-pāpavilla innēno? Innēno? Svarga-narakavilla innēno? Innēno? Guhēśvaraliṅgava vēdhisi sukhiyāda baḷika innēno? Innēno?
Hindi Translation करणादि गुण दूरकर नवचक्र भिन्न होनेपर और क्या? और क्या? पुण्य नहीं , पाप नहीं ,और क्या? और क्या? स्वर्ग नहीं , नरक नहीं, और क्या? और क्या? गुहेश्वर जैसे लिंग दूरकर सुखी होनेपर और क्या? और क्या? Translated by: Eswara Sharma M and Govindarao B N
Tamil Translation மன இயல்புகளழிந்து, ஒன்பது சக்கரங்களைப் பிளந்தபின் இன்னும் என்ன உளது? இன்னும் என்ன உளது? புண்ணியமில்லை, பாவமில்லை, இன்னும் என்ன, இன்னும் என்ன? சுவர்கமில்லை, நரகமில்லை, இன்னும் என்ன, இன்னும் என்ன? குஹேசுவரனெனும் இலிங்கத்தில் ஒருமித்த பிறகு இன்னும் என்ன உளது? இன்னும் என்ன உளது? Translated by: Smt. Kalyani Venkataraman, Chennai
ಶಬ್ದಾರ್ಥಗಳು ಕರಣಾದಿ ಗುಣಂಗಳು = ಚಿತ್ತದಲಿ ಏಳುವ ವೃತ್ತಿಗಳು; ನವಚಕ್ರಂಗಳು = ದೇಹಾಂತರಂಗದೊಳಗಿರುವ ಒಂಭತ್ತು ವಿಶೇಷ ಸ್ಥಾನಗಳು; ಪುಣ್ಯ-ಪಾಪ, ಸ್ವರ್ಗ- = ಎಲ್ಲಿ ಕ್ರಿಯೆಗೆ ಅಸ್ಪದವಿದೆಯೋ ಅಲ್ಲಿ ಪುಣ್ಯ-ಪಾಪ, ಎಲ್ಲಿ ಕಾಲ-ದೇಶಗಳಿಗೆ ಅವಕಾಶವಿದೆಯೋ ಅಲ್ಲಿ ಸ್ವರ್ಗ-ನರಕ; Written by: Sri Siddeswara Swamiji, Vijayapura