•  
  •  
  •  
  •  
Index   ವಚನ - 389    Search  
 
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ; ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ. ಅಗ್ನಿಯನತಿಗಳೆದ ಹೋಮ ಸಮಾಧಿಗಳಿಲ್ಲ. ವಾಯುವನತಿಗಳೆದ ನೇಮನಿತ್ಯಂಗಳಿಲ್ಲ. ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ. ಗುಹೇಶ್ವರನೆಂದರಿದವಂಗೆ ಇನ್ನಾವಂಗವೂ ಇಲ್ಲ.
Transliteration Pr̥thviyanatigaḷeda sthāvaraṅgaḷilla; appuvanatigaḷeda tīrthayātregaḷilla. Agniyanatigaḷeda hōma samādhigaḷilla. Vāyuvanatigaḷeda nēmanityaṅgaḷilla. Ākāśavanatigaḷeda dhyāna maunaṅgaḷilla. Guhēśvaranendaridavaṅge innāvaṅgavū illa.
Hindi Translation पॄथ्वि की निंदा से स्थावर नहीं। जल की निंदा से तीर्थस्थान नहीं। अग्नि की निंदा से होम समाधि नहीं। वायु की निंदा से नेम नित्य नहीं, आकाश की निंदा से ध्यान मौन नहीं गुहेश्वर को ही मैं खुद जानने से और कोई अंग है? Translated by: Eswara Sharma M and Govindarao B N
Tamil Translation பூமியைப் புறக்கணித்த நிலைத்த இலிங்கங்களில்லை நீரைப் புறக்கணித்த புண்ணிய நீராடும் பயணங்களில்லை தீயைப் புறக்கணித்த ஹோமம், ஆகுதி இல்லை வாயுவைப் புறக்கணித்த தினசரி நியமங்களில்லை ஆகாயத்தைப் புறக்கணித்த தியான, மௌனங்களில்லை குஹேசுவரனே தான் என்று அறிந்தவனுக்கு. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಿಗಳೆ = ಅಲ್ಲಗಳೆ, ಅಲಕ್ಷಿಸು, ಹೊರತುಪಡಿಸು; ತೀರ್ಥ = ಪವಿತ್ರ ಜಲಪ್ರವಾಹ ಹಾಗೂ ಜಲಾಶಯ; ಧ್ಯಾನ = ಧ್ಯೇಯಕರವಾದ ಮನೋವೃತ್ತಿ ಪ್ರವಾಹ; ನೇಮನಿತ್ಯಂಗಳು = ಉಪವಾಸಾದಿ ವ್ರತಾಚರಣೆಗಳು ಹಾಗೂ ಪ್ರಾಣಾಯಾಮಸಹಿತವಾಗಿ ಮಾಡಲಾಗುವ ದೈನಂದಿನ ಧರ್ಮಾಚರಣೆಗಳು; ಮೌನ = ಬಾಹ್ಯಾಂತರ ನಿಶ್ಯಬ್ದತೆ; ಯಾತ್ರೆ = ಪವಿತ್ರ ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಕೈಕೊಳ್ಳಲಾಗುವ ಪ್ರಯಾಣ; ಸಮಾಧಿ = ಯಜ್ಞದ ಕೊನೆಯಲ್ಲಿ ಅರ್ಪಿಸುವ ಪೂರ್ಣಾಹುತಿ; ಸ್ಥಾವರ = ಸ್ಥಾವರ ಲಿಂಗ ಹಾಗೂ ಮೂರ್ತಿಗಳು; ಹೋಮ = ಅಗ್ನಿಯಲ್ಲಿ ಹವಿಸ್ಸು ಮತ್ತು ಸಮಿತ್ತುಗಳನ್ನು ಯಥಾವಿಧಿ ಅರ್ಪಿಸುವುದು; Written by: Sri Siddeswara Swamiji, Vijayapura