Index   ವಚನ - 161    Search  
 
ನಾರಿವಾಳವ ತಂದು ನಾಯಮುಂದೆ ಹಾಕಿದಡೆ, ಒಡೆಯಲರಿಯದು, ತಿನಲರಿಯದು. ಅದರವೊಲು ಜಂಗಮದೊಳಗೆ ಲಿಂಗವನರಿ[ಯ]ದವ ಭಂಗಿಯ ತಿಂದಂತೆ. ತನ್ನ ಹೊದ್ದಿದ್ದ, ತನ್ನ ತಾ ತಿಳಿಯಲರಿಯದಿದ್ದಡೆ ತೆಂಗ ತಿನಲರಿಯದ ನಾಯಂತೆ ಎಂದನಂಬಿಗರ ಚೌಡಯ್ಯ.