ನಾಲ್ಕು ವೇದವನೋದಿದ ನಂತರ ಮನೆಯ ಬೋನವ
ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು.
ಸಾಮವೇದಿ ಹೋಗುತ್ತಿರಲು
ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು.
``ಶ್ವಾನೋ ಶ್ರೇಷ್ಠ ವೆಂದು ಇಕ್ಕಿದೆನು ಮುಂಡಿಗೆಯ.
ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು.
ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ
ಮೋರೆಯ ಮೇಲೆ ಹೊಡೆ ಎಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.