ಹುಲಿಯ ತಲೆಯ ಹುಲ್ಲೆ, ಹುಲ್ಲೆಯ ತಲೆಯ ಹುಲಿ,
ಈ ಎರಡರ ನಡು ಒಂದಾಯಿತ್ತು! ಹುಲಿಯಲ್ಲ ಹುಲ್ಲೆಯಲ್ಲ.
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದಡೆ,
ಎಲೆ ಮರೆಯಾಯಿತ್ತು ಕಾಣಾ, ಗುಹೇಶ್ವರಾ.
Transliteration Huliya taleya hulle, hulleya taleya huli,
ī eraḍara naḍu ondāyittu! Huliyalla hulleyalla.
Keladalondu bandu melukāḍittu nōḍā.
Taleyillada muṇḍa tarageleya meddaḍe,
ele mareyāyittu kāṇā, guhēśvarā.
English Translation 2 Is it a tiger-headed deer, or
A deer-headed tiger?
For the two have grown to a trunk.
No, it's neither tiger nor deer.
Near by, chewing the cud,
Another beast has come.
If a headless trunk will browse
On dry leaves,
Is it a wonder, O Guheśvara,
If one loses sight of
The green leaves?
Hindi Translation बाघ के सिर का हिरन, हिरन के सिर का बाघ ;
दोनों की कमर एक है।
बाघ नहीं, हिरन नहीं।
बीच में एक आकार गाजुगलता देखो !
बिना सिर कमर सूखे पत्ते चबाये तो
पत्ता ओजल हो गया देखो गुहेश्वरा ।
Translated by: Eswara Sharma M and Govindarao B N
Tamil Translation புலியின் தலையில் மான், மானின் தலையில் புலி
இவற்றின் மூலவுடல் ஒன்றாக விளங்கியது
மானன்னு, புலியன்று!
அதனருகில் வந்து மென்றது காணாய்!
தலையற்ற முண்டம் உலர்ந்த இலையை மேய்ந்தால்
இலை மறைந்தது காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಲೆ = ಸಂಸಾರ; ತಲೆ = ಸ್ವರೂಪಜ್ಞಾನ; ಮುಂಡ = ಜಡದೇಹ; ಹುಲಿ = ಕಾಲ.; ಹುಲಿಯ ತಲೆಯ ಹುಲ್ಲೆ = ಕಾಲದ ರೂಪದಲ್ಲಿರುವ ಮೋಹ; ಹುಲ್ಲೆ = ಮೋಹ; ಹುಲ್ಲೆಯ ತಲೆಯ ಹುಲಿ = ಮೋಹರೂಪದಲ್ಲಿರುವ ಕಾಲ;
Written by: Sri Siddeswara Swamiji, Vijayapura