Index   ವಚನ - 191    Search  
 
ಬ್ರಹ್ಮ ಕುಮಾರ, ವಿಷ್ಣು ಅಬಳ, ಲೆಕ್ಕವಿಲ್ಲದ ರುದ್ರರು ನೋಡಾ. ದೇವರ್ಕಳೆಲ್ಲಾ ಗರ್ವದಲೈದಾರೆ, ಅವರೆತ್ತಬಲ್ಲರು ಶಿವನಾದಿಯಂತುವ? ಶಾಶ್ವತಪದಕ್ಕೆ ಸಲ್ಲದ ಕಾರಣ, ಇವರು ವೇಷಧಾರಿಗಳೆಂದಾತನಂಬಿಗರ ಚೌಡಯ್ಯ.