ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು
ನೀಗಿರೊ ನಿಮ್ಮ ಭವಬಂಧನದ ಸಾಗರವನು.
ಪ್ರಾಣತ್ಯಾಗವು ಈಗಲೋ ಆಗಲೋ ಯಾವಾಗಲೋ
ಎಂದರಿಯಬಾರದು.
ರೋಗ ರುಜೆಗಳಿಗೆ ಅಗರವು ನಿಮ್ಮ ಒಡಲು.
ತನು-ಮನ-ಪ್ರಾಣವ ನೆಚ್ಚದಿರು,
ನಾಗಭೂಷಣನ ಪಾದಪೂಜೆಯ ಮಾಡಿ,
ಶಿವಯೋಗದಲಿ ಲಿಂಗವನೊಡಗೂಡಿ
ಸಾಗಿ ಹೋಗುವವರನು
ಭವಗೇಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.