Index   ವಚನ - 216    Search  
 
ಮಾತಿನ ವೇದ, ನೀತಿಯ ಶಾಸ್ತ್ರ, ಘಾತಕದ ಕಥೆ ಕಲಿವುದಕ್ಕೆ ಎಷ್ಟಾದಡೂ ಉಂಟು. ಅಜಾತನ ಒಲುಮೆ, ನಿಶ್ಚಯವಾದ ವಾಸನೆಯ ಬುದ್ಧಿ, ತ್ರಿವಿಧದ ಆಸೆಯಿಲ್ಲದ ಚಿತ್ತ, ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ ಇಷ್ಟಿರಬೇಕೆಂದನಂಬಿಗರ ಚೌಡಯ್ಯ.