Index   ವಚನ - 219    Search  
 
ಮಾಯೆಯ ಬಸುರಲ್ಲಿ ಬಂದಾತ ಮಹೇಶ, ದೇವಕಿಯ ಬಸುರಲ್ಲಿ ಬಂದಾತ ವಿಷ್ಣು, ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ, ಮರುತದೇವಿಯ ಬಸುರಲ್ಲಿ ಬಂದಾತ [ಅರುಹ]. ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು, ಮುಕ್ತಿಯಾಗದೆಂದಾತನಂಬಿಗರ ಚೌಡಯ್ಯ.