Index   ವಚನ - 220    Search  
 
ಮೂರುವ ಮುಟ್ಟಿದೆ, ನಾಲ್ಕುವನಂಟದೆ, ಐದುವನೆಯ್ದಲುಬೇಡ ಕಂಡಾ. ಆರುವ ಜಾಳಿಸಿ, ಏಳುವ ಹಿಡಿಯದೆ, ಎಂಟುವ ಗಂಟಿಕ್ಕಬೇಡ ಕಂಡಾ. ಒಂಬತ್ತು ಬಾಗಿಲ ಹಿಂದಿಕ್ಕಿ ಹೋದಡೆ ಅಂಬಿಗರ ಚೌಡಯ್ಯನ ಉಪದೇಶವಯ್ಯಾ.