Index   ವಚನ - 225    Search  
 
ರತಿಯೆಂಬುದೆ ಪ್ರಾಣ, ಘಟವೆಂಬುದೆ ಕಲ್ಲು. ಪ್ರಾಣವಿಲ್ಲದ ಘಟ, ಜ್ಞಾನವಿಲ್ಲದ ಕ್ರೀ ಈ ಉಭಯಕ್ಕೂ ನಾನಾರೆಂಬುದ ತಾನರಿಯಬೇಕೆಂದನಂಬಿಗರ ಚೌಡಯ್ಯ.