Index   ವಚನ - 248    Search  
 
ಶೀಲವಂತನೆಂಬವ ಶಿವದ್ರೋಹಿ, ಭಾಷೆವಂತನೆಂಬವ ಬ್ರಹ್ಮೇತಿಕಾರ, ನೇಮಸ್ತನೆಂಬವ ನೇಮಕ್ಕೆ ಗುರಿಯಾದ, ಅಚ್ಚ ಪ್ರಸಾದಿ ನಿಚ್ಚ ಕುನ್ನಿ. ಇವರು ನಾಲ್ವರು ಹೋದಲ್ಲಿ ಹೊಗಲಾಗದು, ಬಂದಲ್ಲಿ ಬರಲಾಗದು, ನಿಂತಲ್ಲಿ ನಿಲಲಾಗದು, ಕುಳಿತಲ್ಲಿ ಕುಳ್ಳಿರಲಾಗದು. ಈ ನಾಲ್ವರಿಗೂ ಲಿಂಗವಿಲ್ಲ, ಗುರುವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ, ನಾ ಮೊದಲೇ ಇಲ್ಲ. ಅದೇನು ಕಾರಣವೆಂದಡೆ, ನಿರಂತರ ಜಂಗಮ ಕೈ ಕಡ[ವಸ]ವಾಗಿ ಬರುತ್ತಿರಲು ಅವರ ಕಪ್ಪರ ಬಟ್ಟಲು ನಮ್ಮ ಭಾಜನ ಭಾಂಡವ ಮುಟ್ಟಬಾರದು ಎಂಬ [ಮನದ]ಹೊಲೆಯರಿಗೆಲ್ಲಿಯ ಶೀಲವೋ ಅಂಬಿಗರ ಚೌಡಯ್ಯ!