ಮರನೊಳಗಣ ಕಿಚ್ಚು ಮರನಸುಟ್ಟಂತಾದೆನಯ್ಯಾ.
ಬಯಲ ಗಾಳಿಯ ಪರಿಮಳ ನಾಸಿಕವನಪ್ಪಿದಂತಾದೆನಯ್ಯಾ.
ಕರುವಿನ ಬೊಂಬೆಯನುರಿಯುಂಡಂತಾದೆನಯ್ಯಾ.
ಗುಹೇಶ್ವರನೆಂಬ ಲಿಂಗವ ಪೂಜಿಸಿ ಭವಗೆಟ್ಟೆನಯ್ಯಾ.
Transliteration Maranoḷagaṇa kiccu maranasuṭṭantādenayyā.
Bayala gāḷiya parimaḷa nāsikavanappidantādenayyā.
Karuvina bombeyanuriyuṇḍantādenayyā.
Guhēśvaranemba liṅgava pūjisi bhavageṭṭenayyā.
English Translation 2 I was
as if the fire in the tree
burned the tree
as if the sweet smells
of the winds of space
took over the nostrils
as if the doll of wax
went up in flames
I worshipped the Lord
and lost the world.
Translated by: A K Ramanujan
Book Name: Speaking Of Siva
Publisher: Penguin Books
---------------------
Hindi Translation पेड में छिपीअग्नि पेड जलाये जैसे हुआ।
मैदान की वायु परिमल नासिक स्वीकार किये जैसे हुआ।
लाख गुडिया अग्नि से लिपट गयी जैसी हुई।
गुहेश्वर नामक लिंग पूजाकर भव से दूर हुआ।
Translated by: Eswara Sharma M and Govindarao B N
Tamil Translation மரத்திலுள்ள தீ மரத்தைச்
சுட்டதனைய ஆனேனையனே
வயல்வெளியின் வெளிக்காற்றின் மணத்தை
மூக்கு முகர்ந்ததனைய ஆனேனையனே.
அரக்கு பொம்மையை தீ
சூழ்ந்ததனைய ஆனேனையனே
குஹேசுவரனெனும் இலிங்கத்தைப் பூஜித்து
பிறவியற்றவன் ஆனேனையனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪ್ಪಿದಂತೆ = ಸ್ಪರ್ಶಿಸಿದಾಗ ಮನವು ಆ ಗಂಧಸೌಖ್ಯದಿಂದ ಮುಗ್ಧವಾಗುತ್ತದೆ; ಆದೆನಯ್ಯಾ = ಶರಣನಾದ ನಾನು ಆದೆನು; ಆದೆನಯ್ಯಾ = ಶರಣನಾದ ನಾನು ಆದೆನು; ಆದೆನಯ್ಯಾ = ಶರಣನಾದ ನಾನು ಆದೆನು; ಉರಿಕೊಂಡಂತೆ = ಉರಿ ಆವರಿಸಿದಾಗ ಆ ಗೊಂಬೆಯು ಕರಗಿಹೋಗುತ್ತದೆ; ಕರುವಿನ = ಎರಕಹೊಯ್ದು, ಅರಗಿನ; ಕಿಚ್ಚು = ಅಗ್ನಿಯು(ಮರ ಮರ ಘರ್ಷಣೆಯಿಂದ ವ್ಯಕ್ತವಾಗಿ); ನಾಸಿಕವನು = ಗಂಧ-ಗ್ರಹಣೇಂದ್ರಿಯವನು; ಪರಿಮಳ = ಸುವಾಸನೆಯು; ಪೂಜಿಸಿ = ಆ ಲಿಂಗವೆ ನಾನು ಎಂಬ ಅನುಸಂಧಾನದಿಂದ ಅರ್ಚಿಸಿ; ಬಯಲ ಗಾಳಿಯ = ಮುಕ್ತವಾಗಿ ಹರಿವ ಗಾಳಿಯಲ್ಲಿಯ; ಬೊಂಬೆಯನು = ಗೊಂಬೆಯನ್ನು; ಭವಗೆಟ್ಟೆನು = ಜನ್ಮ-ಮರಣ ಹಾಗೂ ದುಃಖರೂಪ ಭವದಿಂದ ನಾನು ಮುಕ್ತನಾದೆನು; ಮರನ ಸುಟ್ಟಂತೆ = ಆ ಮರವನ್ನೆ ಸುಟ್ಟು ಹಾಕುತ್ತದೆ; ಮರನೊಳಗಣ = ಮರದೊಳಗೆ ಅವ್ಯಕ್ತವಾಗಿ ಅಡಗಿದ; ಲಿಂಗವ = ಭಾವಲಿಂಗವನ್ನು;
Written by: Sri Siddeswara Swamiji, Vijayapura