Index   ವಚನ - 261    Search  
 
ಸೃಷ್ಟಿಯ ಕಲ್ಪಿಸುವ ಕರ್ತ ಬ್ರಹ್ಮಂಗೆ ಶತಾಯುಗನೆಂಬ ಗಣಿತವಿದೇನು? ಸಕಲಜೀವಿಗಳ ರಕ್ಷಿಸುವ ವಿಷ್ಣುವಿಂಗೆ ದಶಾವತಾರವೆಂಬ ಗಣಿತವಿದೇನು? ಕೋಪಾಗ್ನಿರುದ್ರನೆಂಬ ಜಮದಗ್ನಿಯ ತಲೆಯನರಿದವರಾರು? ಮೂವತ್ತುಮೂರು ಕೋಟಿ ದೇವರ್ಕಳನಾಳಿದ ರಾವಣಂಗೆ ಅಳಿವೆಂಬುದೇನು? ಹರಸಿ ಲಕ್ಷವಿಪ್ರರು ನಿಚ್ಚ ಮಂತ್ರಾಕ್ಷತೆಯನಿಡುತ್ತಿರಲು ದುರ್ಯೋಧನಂಗೆ ಸಾವೆಂಬುದೇನು? ಹರನೆ ನೀ ಹರಸಿ ಪಟ್ಟವ ಕಟ್ಟಿಕೊಟ್ಟಂತಲ್ಲದೆ ಇಲ್ಲ. ಎಲ್ಲರಿಗೆಯೂ ಮೂರು ಲೋಕದೊಳಗೆ ನೀನೊಬ್ಬನೆ ಒಡೆಯನೆಂದನಂಬಿಗರ ಚೌಡಯ್ಯ