Index   ವಚನ - 260    Search  
 
ಸಹಜವಯ್ಯ ಶಿವಗಣಂಗಳ ನುಡಿ ಸತ್ಯವು. ಪಾಷಂಡಿ ಪ್ರಪಂಚಿಗಳ, ದಾಸಿ, ವೇಶಿಯರ, ಕಾಸಿಗಾಸೆಮಾಡುವ ಮೂಷಕರ, ಪಶುಭಕ್ಷಕರನೆಂತು ಮಹಂತಿನ ದೇವರೆನಬಹುದಯ್ಯ? ವೇಶಿಯಂತೆ ವೇಷವ ಹಲ್ಲಣಿಸಿಕೊಂಡು, ಸರ್ವರಿಗೆ ಸುಮತ ಸುವಚನವ ನುಡಿದು, ಶಿವಭಕ್ತರ[ನ]ಣ್ಣಿಸಿ ಬಣ್ಣಿಸಿ, ಕಾಸುವೀಸಗಳನಿಸಿದುಕೊಂಡು ಪಾಶಬದ್ಧರಾಗಿ ಹೇಸಿಕೆಯ ಕಿಸುಕುಳದ ಮೂತ್ರದ ಕುಳಿಯಲ್ಲಿ ಹೊರಳುವ ಧೂರ್ತ ಲಾಂಛನಿಗಳು ಯಮಪುರದಲ್ಲಿ ಲೋಲರಾಗಿಪ್ಪರೆಂದಾತನಂಬಿಗರಚೌಡಯ್ಯ.