Index   ವಚನ - 18    Search  
 
ಅಕ್ಷಿಯ ಮಧ್ಯದ ಕಾಳಿಕೆಯ ನಟ್ಟನಡುವಳ ಸೂತ್ರ[ದೋ]ರುವ ಚಿನ್ನ ಉಡುಗಿದ ಮತ್ತೆ ಅಕ್ಷಿಯ ತೆರಪು ಎಷ್ಟಾದಡೇನು? ಆ ತೆರದಂತೆ, ಲೌಕಿಕದಲ್ಲಿ ಮಾಡುವ ವರ್ತಕ ವಸ್ತುವನರಿಯದ ಜ್ಞಾನ ಧನಕನಕ ವಾಜಿವಾಹನಂಗಳಿಂದ ಲೇಪನ ಅಂಬರ ತಸ್ಯಾಂತರ ನಿಳಯಂಗಳಿಂದ ಕೀರ್ತಿಭೂಷಣಕ್ಕೆ ಮಾಡಿದಡೇನು? ಇದನಳಿದು ಅದನರಿತು ಉಭಯ ತನ್ಮಯ ನಷ್ಟವಾಗಿ ಅದರ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.